10/16/07

ನೀನು ಹೋದ ದೂರ ಅದೆಷ್ಠೊe,,,,,,,,

ನೆನಪಿದೆಯಾ..?? ನಮ್ಮ ಮನೇ ಮುಂದೇನೇ ನಿನ್ಮನೆ ಇತ್ತು. ಬೆಳಗಿನ ಕಿರಣ ನೊಡೊ ಮೊದ್ಲು
ನಿನ್ನ ನೊಡೊ ನನ್ನಾಸೆ ನನ್ಗಷ್ಠೆ ಅಲ್ದೇ ನಿನ್ಗೂ ಇತ್ತು. ಹೂವು ಹರಿಯೋ ಸೋಗುಹಾಕಿ, ಕೈಲಿ
ಹೊಪಾತ್ರೆ ಹಿಡ್ದು ಈ (ಸೋ)ಮಾರಿ ದರ್ಶನಕ್ಕೆ ಕಾದ ದಿನಗಳ್ನೆಲ್ಲಾ ಮರ್ತ್ಬಿಟ್ಯಾ. ನಾನೊ ಫುಲ್ ಡೀಸೆಂಟ್
ಹುಡ್ಗನ್ ತರ ಎಲ್ಲರಿಗಿಂತ ಮೊದ್ಲೆ ಎದ್ದು, ಮುಖ ತೊಳ್ದು, ಪುಸ್ತಕ ಹಿಡ್ದು ಮಹಡಿ ಮೇಲೆ ಹತ್ಬಿಡ್ತಿದ್ದೆ.
ಒಂದಿನ ಸುಧಾನೋ, ತರಂಗಾನೋ ಹಿಡ್ದು ಮನೆಯವರೆಲ್ಲರ ಮುಂದೆ ತಮಾಷೆ ಚೆಂಡಾಗಿದ್ದೆ.
ಪಾಪ ನಿಮ್ಮಪ್ಪ, ಎರಡು ಎಕ್ಸ್‌ಟ್ರಾ ಕಣ್ಣು ಹಾಕ್ಕೊಂಡು , ಒಂದ್ ಕೈಯಲ್ಲಿ ಕಾಫೀ, ಇನ್ನೊಂದ್ ಕೈಲಿ
ಕನ್ನಡ ಪ್ರಭ ಹಿಡ್ಕೊಂಡು , ತಾನು ಹಿಡಿದ ಕಳ್ಳನ ವಿಷ್ಯ ಬಂತೋ ಇಲ್ವೋ ಅಂತಾ ನೋಡೋದ್ರಲ್ಲೇ
ಕಳೆದೊಗಿರ್ತಾ ಇದ್ರು. ಎದುರೇ ನಡೀತಿದ್ದ ಹೃದಯ ಗಳ್ಳರ ಲೂಟಿ-ದರೊಡೆ ಗೊತ್ತೇ ಆಗ್ತಿರ್ಲಿಲ್ವಲ್ಲಾ..!!!!
ನಿನ್ನಜ್ಜಿ ಎಡವಟ್ಟಾಗಿದ್ದೇ ಇನ್ನೊಂದ್ ದಿವ್ಸ. ತೀರಾ ಅಷ್ಟೊಂದು ಅಸೇನಾ ನನ್ನ ನೋಡೋಕೆ. ಹೂವು
ಹರಿಯೋಕೆ ಹೂವು ಪಾತ್ರೇನೇ ಮರಿಯೋದೇ..? ಕಿತ್ತ ಹೂವ್ಗಳನ್ನೆಲ್ಲ ಕೈಲಿರೋ ಪಾತ್ರೆಗೇ
ಹಾಕ್ತಾ ಇದೀನಿ ಅನ್ಕೊಂಡು ನೆಲದ ಮೇಲೆ ಹಾಕ್ತಾ ಇದ್ದೆ. ನನ್ಗೂ ಗೊತ್ತಾಗಿರ್‌ಲಿಲ್ಲ , ತುಂಬಾ ಹೊತ್ತು
ಕಣ್ಣಲ್ಲೇ ಮಾತು ನಡೀತಾಇತ್ತು. ನೆಲಕ್ಕೆ ಹಾಕಿದ್ ಹೂವ್ ನೋಡಿ ನಿಮ್ಮಪ್ಪ ನಿನ್ ಹಿಂದೇನೇ ಬಂದು ನಿಂತಿದ್ರು.
ನಂದೋ , ನಿನ್ನ ನೊಡ್ಲಾ.... ನಿಮ್ಮಪ್ಪನ್ನಾ... ಅನ್ನೋ ಪರಿಸ್ಥಿತಿ. ನಿಂಗೆ ಹೇಳಕ್ಕೂ ಆಗ್ದೇ ಬೀಡಕ್ಕೂ ಆಗ್ದೇ
ಆ ಬೆಳಗಿನ ಜಾವದಲ್ಲೇ ಬೆವತುಹೋಗಿದ್ದೆ. ಪ್ರತೀ ದಿನ ದೇವ್ರ ತಲೆ ಮೇಲೆ ಹೂವು ತಪ್ಪಿದ್ರೂ ನಮ್ಮೀ ಆಟ
ತಪ್ತಿರ್ಲಿಲ್ಲ. ಆದ್ರೆ ಅದಾದ ಎರಡು ದಿವಸ ಹಂಗೆ ನೋಡಕ್ಕೆ ಆಗ್ಲೇ ಇಲ್ಲ ಅಲ್ವಾ....
ನಿನ್ನ ಹೃದಯದ ತಳಮಳ ನಂಗೆ ಮುಟ್ಟಿತ್ತು. ಅರ್ಧ ರಾತ್ರೀಲೆ ನಿಮ್ಮನೇ ಕಿಟಕಿ ಹತ್ರ ಬಂದು ಮಲ್ಗಿರೊ
ನಿನ್ನ ಮಂದ ಬೆಳಕಲ್ಲೆ ನೋಡ್ಕೊಂಡು ಹೋಗ್ತಾ ಇರೋದು ನಿನಗೊತ್ತಾಗಿತ್ತು. ಆಗ್ಲೇ ಎದ್ದು ಹೊರಬಂದ ನೀನು
"ದೀಪು , ನಮ್ಮಪ್ಪ-ಅಮ್ಮನ ಸಹವಾಸ ಸಾಕಾಗಿದೆ, ಎಲ್ಲಾದ್ರೂ ತುಂಬಾ ದೂರ ನಾವಿಬ್ರೇ ಹೊಗ್ಬಿಡೊಣ" ಅಂದಿದ್ದೆ.
ಕೆಲವು ಸರಿ ಎದ್ರಿಗೆ ನಿಂತು ಮಾತಾಡಲು ಹೆದರಿ ನಡುಗುತ್ತಿದ್ದ ಆ ನಿನ್ನ ತುಟಿಗಳಿಂದ ಬಂದ ಮಾತು ಚಣಕಾಲ
ದ0ಗು ಬಡಿಸಿತ್ತು. "ಒಂದು ವಾರದ ವರೆಗೂ ಬೇಡ" ಎಂದಷ್ಟೆ ಹೇಳಿದ್ದೆ. ಅಲ್ಲಿ ಇಲ್ಲಿ ದುಡ್ಡು-ಕಾಸು ಗಳಿಸಿ ಕೂಡ
ಇಟ್ಟಿದ್ದೆ.
ನಿನ್ನಾಸೆಗಳೇ ಹಾಗೆ ,ಅದಾದ ಮರುದಿನವೇ ಸಂಜೆ ನೀನು ಸಿಕ್ಕಿದ್ದೆ. ಆಸೆ ಇಂದ ನೋಡಿದ ನನಗೆ
ಬೇಡ ಎಂದು ತಿರಸ್ಕರಿಸಿ "ಹಚ್ಚನೆ ಹಸಿರಿನ ಹುಲ್ಗಾವಲಲಿ ಬೆಚ್ಚನೆ ಸೇರ್ಬೇಕು...ತಂಪನೆ ತೀಡುವ ತಂಗಾಳಿಯಲಿ
ಬೆಂಕಿಯ ಹಚ್ಚಿದ ಹಾಗಿರ್ಬೇಕು ನಮ್ಮೊದಲ ಮಿಲನ" ಅಂತಾ ಹೇಳಿದ್ದೆ...ಕ್ಷಣ ಕಾಲ ತಿಳಿಯದೇ ಪೆದ್ಡು-ಪೆದ್ದಾಗಿ ನೊಡುತ್ತಿದ್ದರೆ,
ಬರಸೆಳೆದು ಬಿಗಿದಪ್ಪಿ ಮುತ್ತಿಕ್ಕಿ ಓಡಿಹೊಗಿದ್ದೆ. ಆ ನಿನ್ನ ಸಿಹಿ ಮುತ್ತಿನ ಮತ್ತಿಳಿಯುವುದರೊಳಗೆ ಬರಸಿಡಿಲೊಂದು ಬಡಿದಿತ್ತು. ನೀನು ತುಂಬಾನೇ ದೂರ ಹೊಗ್ಬಿಟ್ಟೆ ಅಂತ. ನೀನು ಹೋದ ದೂರ ಅದೆಷ್ಠೊe , ಹೋದೆ... ಹೋಗಿ ಬರಲೇ ಇಲ್ಲ.....

!ನೆನಪು... !!!!

10/11/07

ಬಗ್ಗವ ಬಗ್ಗು ಬಡಿದುದ್ದು!!!

"ಅವ್ವಾ, ಅವ್ವಾ...ಸ್ವಾಮೇರು ಹುಲಿ ಎಡವಿದಾರಂತ" ಅರೆ ಮುಚ್ಚಿದ ಮುಂಬಾಗಿಲ ಬಡಿಯುತ್ತ ಹೆದರಿದ ದನಿಯಲ್ಲಿ
ರಂಗ ಕೂಗುತಿದ್ದ. ಮನೆಗೆಲಸ ಮುಗಿಸಿ ಕಸಮುಸುರೆ ಒರಸಿ , ಮನೆದೇವರು ಮಲ್ಲಿಕಾರ್ಜುನ ನಿಗೆ ದೀಪ ಹಚ್ಚಿ
ತಲೆ ಬಾಗಿ ನಿಂತ ತಲೆ ಮೇಲೆ ಸೂರೇ ಕಳಚಿಬಿದ್ದ ಅನುಭವ. "ಕಾಪಾಡಪ್ಪ ಮಲ್ಲಯ್ಯ" ಎನ್ನುತ್ತಾ ಅವಸರವಸರವಾಗಿ
ಹೊರಬಂದು " ಎಲ್ಲಂತೆ, ಯಾವಾಗ" ಎಂದೆ.
"ಕೂರ್ಲಿ ಕಾನೊಳಗoತೆ ಅವ್ವ, ದನಕಾಯೋ ರಾಮಣ್ಣ ಹೇಳ್ದ"
"ಅವ್ನು ಅಲ್ಲಿಗೆ ಹೋಗಿದ್ನ ?"
"ಹಾ...., ಅವ್ನು ದನ ಹೊಡ್ಕೊಂಡ್ ಬರ್ತಾ ಇದ್ನಂತೆ, ಅವ ಹೇಳಿದ್ರು ಕೇಳ್ದೆ ,ಸ್ವಾಮೇರು ಕೂರ್ಲಿ ಕಾನೊಳಗ ಹೋದ್ರಂತೆ.
ಸ್ವಲ್ಪ ಹೊತ್ತನಲ್ಲೇ ಹುಲಿ ಗರ್ಜಿಸಿದ್ದು ಅವ್ನಿಗೆ ಕೇಳ್ಸ್ ತಂತೆ"
ತದಮಾಡದೆ ಬಾಗಿಲು ಜಡಿದು ಗಟನೆಯ ಜಾಡು ಹಿಡಿಯಲು ಕಾಡಿಗೆ ಹೊರಟುನಿಂತೆ. ಮನೆಯ ಜ0ತಿಗೆ ಕಟ್ಟಿದ್ದ ಲಾಟೀನನ್ನು
ದೊಣ್ಣೆಗೆ ಸಿಗಿಸಿ ಭುಜದಮೇಲೆ ಏರಿಸಿಕೊಂಡು ರಂಗನೂ ತಯಾರಾದ. ಪಡುವಣ ದಿಕ್ಕಲಿ ಕಮಣಿ ಕಣ್ಣು ಮುಚ್ಚುವ ಸಮಯ.
ದಿನವೆಲ್ಲ ಮೇದು ಮನೆಗೆ ಹಿಂತಿರುಗುತಿದ್ದ ದನಕರುಗಳು ಗೊಧೊಳಿ ಎಬ್ಬಿಸಿದ್ದವು. ಕೂರ್ಲಿ ಕಾನು ಸುಮಾರು ನಾಲ್ಕು ಮೈಲಿ
ದಾರಿ , ಅದಕ್ಕಿದ್ದ ಕಾಡಿನ ಕಿಕ್ಕಿರಿದ ದುರ್ಗಮ ಮಾರ್ಗ, ಭಯಾನಕ ವಾಗಿ ಬೆಳೆದುನಿಂತ ಕಾನು, ಗೂಡಿಗೆ ತಿರುಗಿದ್ದ ಬಾನಾಡಿಗಳ
ಉಲಿತ, ಜೇಂಕರಿಸಲು ಶುರುವಿಕ್ಕಿದ ಕೀಟ ,ಮನದಲ್ಲಿದ್ದ ದುಗುಡವನ್ನು ಇಮ್ಮಡಿ ಗೊಳಿಸಿದ್ದವು.
"ಹೇಳಿದ್ರೆ ಕೇಳಲ್ಲ ಸ್ವಾಮೇರು, ಮೊನ್ನೆನೇ ಹೇಳೇನಿ ಹುಲಿ ಕಂಡೂದ್ವು ಅಂತ ನಂಗೆ ಬಯ್ದುದ್ರು 'ನಂಕಿಂತ ದೊಡ್ಡ ಹುಲಿ ಎನ್ಲೆ ಅದು' ಅಂತ"
ದೊಣ್ಣೆಯನ್ನು ಎಡಭುಜದಮೇಲೆ ಇಟ್ಟುಕೊಳ್ಳುತ್ತಾ ರಂಗ ಮಾತು ಮುಂದುವರೆಸಿದ್ದ " ನೋಡ ಅವ್ವಾ , ನೀನಾರು ಸ್ವಲ್ಪ ಹೆಳ್ ಬಾರ್ದೇ
ಅವ್ರಿಗೆ, ಚಕ್ಕಡಿ ಅಲ್ಲೇ ಹೊಡ್ಕಂಡ್ ಬರ್ಬೇಕು ಅನ್ನೋದಾದ್ರೂ ಎನಿತ್ತು? ತನಗುಂದದ ಕಾನೊಳಗೆ ಬಂದಿದ್ರೆ ಇದೆಲ್ಲ ಆಗ್ತಾನೇ ಇರ್ಲಿಲ್ಲ".
ನಡೆದಿರಬಹುದಾದ ದುರ್ಗಟನೆ ಬಗ್ಗೆ ಇದ್ದ ಚಿಂತೆಇಂದ ಅವನ ಮಾತಿಗೆ ಉತ್ತರಿಸದಾದೆ. ಎರಡು ಮೈಲಿ ನಡೆಯುವಷ್ಟರಲ್ಲಿ ಸುತ್ತಲೆಲ್ಲ ಕತ್ತಲಾವರಿಸಿ
ರಂಗ ಹಿಡಿದಿದ್ದ ಲಾಟೀನು ದಾರಿ ದೀಪವಾಗಿತ್ತು. ಅಕಸ್ಮಾತ್ ಬರಬಹುದಾದ ಕಾಡು ಪ್ರಾಣಿಗಳಿಗೆ ಹೆದರಿಸಲು ಕೂಗುತ್ತಾ ರಂಗ ಮುನ್ನೆಡೆದಿದ್ದ.
ಸುಮಾರು ಆರ್ದ ಮೈಲಿ ಸಾಗುವಷ್ಟರಲ್ಲಿ ದೂರದಲ್ಲೆಲ್ಲೋ ಎತ್ತಿನ ಗೆಜ್ಜೆಯ ನಾದ. " ಆವ್ವಾ, ನಮ್ಮೆತ್ತಿನ ಗೆಜ್ಜಿ ಅದು, ಸ್ವಾಮೇರು ಇಲ್ಲೇ
ಎಲ್ಲೋ ಬರ್ತಾ ಅವ್ರೆ" ಹರ್ಷದಿಂದ ರಂಗ ಹೇಳಿದ. ತೀಕ್ಷಣವಾಗಿ ಕೆಳಿಸುತ್ತಿದ್ದ ಗೆಜ್ಜೆಯ ನಾದ ಜೋರಾಗಿ ಕೇಳಹತ್ತಿತು.
ಅದೇ ಮಾರ್ಗವಾಗಿ ಬರುತ್ತಿದ್ದ ಅವರು ರಂಗನ ಕೂಗು ಕೇಳಿ "ಲೇ ಯಾರೋ ಅದು ..?" ಎಂದರು.
"ಸಾಮಿ , ನಾನ್ ರಂಗ, ಆ ದನಕಾಯೋ ರಾಮಣ್ಣ ನೀವು ಹುಲಿ ಎಡ್‍ವೀರಿ ಅಂತ ಊರ್ತೂಂಬಾ ಹಬ್ಸಾನೆ, ಅದ್ಕೆ ನಾನು ಅವ್ವ ಬಂದ್ವಿ"
" ತೋ , ಹುಚ್ಛ್ ಸೂಳೆಮಗ, ಅವ ಹೇಳಿದ್ ಹುಲಿರಾಯನ್ ನೋಡ್ ಬಾ ಹೆಂಗ್ ಮಲ್ ಗ್ಯಾನೆ ಚಕ್ಕಡಿಯಾಗ"
" ಆಆಆಆಆಆ..... .ಅದೇ ಹುಲಿನಾ....??, " ಕಕ್ಕಾಬಿಕ್ಕಿಯಾದ ರಂಗ ಚಕ್ಕಡಿ ಹತ್ರ ಹೋದ.
"ಲೇ ನೀನ್ಯಾಕೆ , ಬಂದೆ, ನಿಂಗಾದ್ರೂ ಗೊತ್ತಾಗಲ್ವಾ ರಂಗ, ಅವಲ್‌ನ್ಯಾಕೆ ಕರ್ಕೊಂಡ್ ಬಂದೆ ಈ ಕಾನೊಳಗ"
"ಇಲ್ಲ ಯಜಮಾನ್ರೆ, ಅವ್ರೆ ಬರ್ತೀನಿ ಅಂತ ಬಂದ್ರು, ನಾ ಹೇಳಿದ್ರ ಕೆಳ್ಲಿಲ್ಲ" ಎನ್ನುತ್ತಾ ತನ್ನಲ್ಲಿದ್ದ ಲಾತೀನು ಬೆಳಕಲ್ಲಿ ಚಕ್ಕಡಿ ಚಕ್ಕಡಿಯಳಗಿದ್ದ
ದೈತ್ಯ ಗಾತ್ರದ ಆ ವ್ಯಾಘ್ರವನ್ನು ನೋಡಿ ಮೂಕವಿಸ್ಮಿತನಾಗಿ ಹೋದ.
ಚಕ್ಕಡಿಯ ಒಂದು ಕಡೆಇಂದ ಇನ್ನೋದು ಕಡೆವರೆಗೂ ನೀಳವಾಗಿ ಮಲಗಿದ್ದ ಆ ಪ್ರಾಣಿ, ಉಸಿರಿಲ್ಲದಿದ್ದರು ಹೆದರಿಸುವಂತಿತ್ತು.
ಪತಿಯ ಬಗ್ಗನ ಬೇಟೆ ಹೆಮ್ಮೆ ತಂದಿತ್ತು, ಆದರೂ ನಡೆಯಬಹುದಾಗಿದ್ದ ದುರ್ಗಟನೆ ಮನದ ಮೂಲೆಯಲ್ಲಿ
ಕುಕ್ಖುತ್ತಿತ್ತು. ಬಾಯ್ತೆರೆದು ಕಣ್ಬಿರಿದು ವಿಶಾಲವಾಗಿ ಮಲಗಿದ್ದ ಹುಲಿಯ ಹತ್ತಿರ ಹೋಗಲು ದೈರ್ಯ ಸಾಲಲಿಲ್ಲ.
"ನಿಮ್ಗೆನಾದ್ರು ಬುದ್ಡಿ-ಗಿದ್ದಿ ಐತಾ.., ಆ ಕಾನಾಗ ಹುಲಿ ಆದವು ಅಂತ ಗೊತ್ತಿದ್ರು ಅಲ್ಯಾಕೆ ಹೊದ್ರಿ..?ಏನಾದ್ರೂ
ಹೆಚ್ಚು ಕಮ್ಮಿ ಆಗಿದ್ರೆ ಗತಿ ಏನು..?"ಎನ್ನಲು " ಲೇ ಹುಚ್ಚಿ, ಈ ನನ್ನ ಗೆಳೆಯ ಇರೋವಾರ್ಗೂ ನಂಗೆನು ಚಿಂತಿಲ್ಲ"
ಚಕ್ಕಡಿಯ ಒಂದು ಬದಿಗಿದ್ದ ಬಂದೂಕಿನೆಡೆ ಕೈ ತೋರಿಸಿ ಮಾತುಮುಂದುವರೆಸಿದ ಪತಿರಾಯ " ನಡಿ, ಹತ್ತು
ಚಕ್ಕಡಿನ, ಹೊತ್ತಾತು ಹೋಗನ" ಎಂದ. ಕಷ್ಟಪಟ್ಟು ಚಕ್ಕಡಿ ಏರಿ ಇದ್ದ ಸ್ವಲ್ಪ ಜಾಗದಲ್ಲಿ ಕುಳಿತೆ. ಹುಲಿಯ ಆ
ಜಿಡ್ಡು ವಾಸನೆ ಹೇಸಿಗೆ ಮೂಡಿಸಿತ್ತು. ಅದೇ ವಾಸನೆಗೆ ಎತ್ತುಗಳು ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಪತಿರಾಯ ಚಕ್ಕಡಿ
ಮುನ್ನಡೆಸಿದ.ಚಕ್ಕಡಿಯ ಕಂಬಿಯಲ್ಲಿ ಕುಳಿತಿದ್ದ ರಂಗ ಕೈಲಿದ್ದ ದೊಣ್ಣೆ ಇಂದ ಮಲಗಿದ್ದ ಮೃಗವನ್ನು ಹೊರಳಾಡಿಸಿ
ಅದರ ಅಂಗಾಗ ನೋಡುತ್ತಾ "ಇದೆಲ್ಲ, ಹೆಂಗಾತು , ಏನೇನಾತು" ಎಂದ."ನೊಡ್ಲೇ, ನಾನು ತನಗುಂದದ ಕಾನೊಳಗೇ ಬರ್ಬೇಕು ಅನ್ಕೊನ್ಡಿದ್ದೆ , ಹೊತ್ತು ಮೀರಿ ಹೋತು.
ಅದಕ ಕೂರ್ಲಿ ಕಾನೊಳಗ ಬಂದೆ. ಎಲ್ಲಾನೂ ಸರಿನೇ ಇತ್ತು. ಆ ಗೌಡ್ರ ಗದ್ಡಿಹತ್ರ ಇರೋ ತೊರೆ
ದಾಟವರ್ಗೂ. ನೀ ಹೆಳ್ದ್ಯಲ್ಲ ದನಕಾಯೋ ರಾಮಣ್ಣ ಅಲ್ಲೇ ಸಿಕ್ಕಿದ್ದು. ಬ್ಯಾಡ ಸ್ವಾಮಿ ಹುಲಿ ಬಾಂದತಂತೆ
ಈ ಕಾನೊಳಗ ಅಂತ ಹೇಳಿ ಅತ್ಲಗಿಂದ ದನಾಹೊಡ್ಕಂಡ್ ಹೋದ. ಇಲ್ಲೆಲ್ಲಿ ಬರ್ಬೇಕು ಬಿಡೋ ಮಾರಾಯ
ಅಂದು ತೊರಿ ದಾಟ್ಸೆ ಬಿಟ್ಟೆ. ಚ್‌ಕ್ಕಡಿ ಹೋಗ್ತಾನೇ ಇತ್ತು.ಸ್ವಲ್ಪ ದೂರ ಮೇಲೆ ಎತ್ತು ಎತ್ತೆತ್ಲಗೊ ಜಗ್ಗಾಕ್ ಶುರು
ಮಾಡಿದ್ವೂ , ಅವಕ್ಕ್ ಗೊತ್ತಾಗ್ ಹೋಗಿತ್ತು ಹತ್ರ ಎಲ್ಲೋ ಹುಲಿನೊ, ಚಿರ್‍ತೇನೋ ಐತಿ ಅಂತ. " ಮುಂದುವರೀತಿದ್ದ
ಮಾತಿಗೆ ತಡೆಯೊಡ್ದಿದ ರಂಗ " ಅವಕ್ಕ್ ಹೆಂಗ ಗೊತ್ತಾಕತೀ"
"ಈಗ ಜೊರಾಗಿ ಬರ್ತಾ ಐತಲ್ಲ ಈ ಜಿಡ್ಡು ವಾಸ್ನೆ, ಎತ್ತಿಗೆ ತುಂಬಾ ದೂರ್ದಿಂದ್ಲೇ ಗೊತ್ತಾಗ್ ಹೊಗ್ತತೀ.
ಅಷ್ಟೋತ್ತಿಗೆ ನಾನು ನನ್ನ್ ಬಂದೂಕು ತಯಾರ್ ಮಾಡ್ಕಂಡ್ ಬಿಟ್ಟೆ. ಇದ್ದಕಿದ್ದಹಂಗ ದೂರದ್ ಪೊದೆಯೊಳ್ಗ
ಸಟಸಟ ಅಂತ ಶಬ್ದ ಬಂತು, ಎತ್ತು ನಿಂತ ಬಿಟ್ವು. ಒಂದ ಕ್ಷಣದಾಗ ಪೊದೆ ಇಂದ ದೈತ್ಯ ಗಾತ್ರದ ಈ ಮೃಗ
ಹೊರಬಂತು, ನೋಡಿ ದಂಗಾಗಿ ಹೋದೆ, ಆದ್ರೂ ದೈರ್ಯ ತಗೊಂಡು ನಿಶಾನಿ ಇಟ್ಟು ಹೊಡ್ದೇ ಬಿಟ್ಟೆ..
ಈ ಸರೀನು ಗುರಿ ತಪ್ಲಿಲ್ಲ, ತಲಿ ಹೊಕ್ಕ ಆ ಗುಂಡಿಗೆ ಹುಲಿ ಒಂದೇ ಸಲ ಜೊರಾಗ್ ಗರ್ಜಿಸಿ ಮಲ್ಗೇ ಬಿಟ್ತು.
ಅದೇ ಗರ್ಜನೆ ರಾಮಣ್ಣಗೂ ಕೇಳ್ಸಿರ್ಬೆಕು ಅದನ್ನ ಅವ ಹೆಳ್ಯಾನೆ. ಅಲ್ಲಿಂದ ಮುಂದ ನಡೆದಿದ್ದೇ ದೊಡ್ಡ ರಾಮಾಯಣ.
ಎತ್ತು ಹೆದ್ರಿ ದಿಕ್ಕಾಪಾಲಾಗಿ ಒಡ್ಬಿಟ್ವು.ಅವ್ನ್ ಹಿಡ್ಕೊಂಡ್ ಬಂದು ಮರಕ್ಕೆ ಕಟ್ಟಿ ಹಾಕಿ. ಅಲ್ಲೇ ಬಿದ್ದಿದ್ದ ಈ ಪ್ರಾಣಿನ ಚಕ್ಕಡಿಗೆ ಹೇರಿ
ಮತ್ತೆ ಎತ್ತು ಕಟ್ಟದ್ರೊಳಗ ಹೆಣ ಬಿದ್ ಹೋತು. ಎಲ್ಲ ಮುಗ್ಸ್‌ಕೊಂಡು ಗಾಡಿ ಹೊಡ್ಕಂಡು ಬರ್ತಾ ಇದ್ದೆ ಎದುರಿಗೆ ನೀವ್ ಸಿಕ್ರಿ."
ಮೆಲ್ಲನೆ ಸಾಗುತ್ತಿದ್ದ ಬಂಡಿ ಊರಿನ ಅಗಸೆಗೆ ಬಂದು ಇದ್ದ ನಾಲ್ಕಾರು ಮನೆಗಳ ದಾಟಿ ಮನೆ ಸೇರಿತ್ತು.
ಮನೆ ಅಂಗಳ ದಲ್ಲಿ ಸೇರಿದ್ದ ಕೆಲವು ಮಂದಿ ನಮ್ಮನ್ನು ಸ್ವಾಗತಿಸಿದರು. ಇಹಲೋಕ ತೊರೆದಿದ್ದ ಹುಲಿರಾಯನನ್ನು ಎಲ್ಲರೂ ಸೇರಿ ಎತ್ತಿಟ್ಟು,
ಪ್ರತಿಯೊಂದು ಅಂಗಾಂಗಗಳನ್ನು ಅವ್ರ್ವರ ಧಾಟಿಯಲ್ಲಿ ವಿವರಿಸುತ್ತಿದ್ದರು. ಕೊನೆಯ ಜಾವದ ವರೆಗೂ ಅದೇ ನಡೆದಿತ್ತು.
ಬೆಳಗಾದ ಮೇಲೆ ಹೊಲೆಯ ದರ್ಮ ನಿಂದ ಮರಣೋತ್ತರ ಪರೀಕ್ಷೆ ನಡೆಸಿ, ಬಂದ ಚರ್ಮವನ್ನು ಅದ್ಯಾವುದೋ ಮಠದ ಸ್ವಾಮಿಜಿಗೆ ಅರ್ಪಿಸಿದರು, ಉಗುರು, ಕೂದಲು
ಗಳನ್ನೆಲ್ಲ ಹಂಚಿಕೊಂಡರು..."
ಅಜ್ಜಿ ತನ್ನ ಗಂಡ ಮಾಡಿದ ಬಗ್ಗನ ಬೇಟೆಯನ್ನು ಹೆಮ್ಮೆಯಿಂದ ಹೇಳುತ್ತಿದ್ದಳು. ಅವಳ ತೊಡೆಯ ಮೇಲೆ ಮಲಗಿ ಕುತೊಹಲದಿಂದ ಕೇಳುತ್ತಿದ್ದ ನಾನು ನಿದ್ರಾದೇವತೆಗೆ
ಶರಣಾಗಿದ್ದೆ...........

10/7/07

98860... ಅಲ್ಲ 99860..ಅಲ್ವೇ ಅಲ್ಲ...

ಆಗ ತಾನೇ ಬಂದ ಮಿಸ್ ಕಾಲ್ ಗೆ ಕಾಲ್ ಮಾಡಿ ಕಿವಿಗೆ ಮೊಬೈಲ್ ಹಿಡಿದು ಕೆಲಸ ಮುಂದುವರಿಸಿದ್ದೆ.
"ತೆರೇ ಮೆರೇ ಬೀಚ್ ಮೇ... ಕೈಸಾ ಹೈ ಎ ಬಂಧ ನ್ ... ಆಂಜಾನಾ" ಎಂದು ಗುನುಗುತ್ತಿದ್ದ ಮೊಬೈಲ್
ಸುಮಾರು ದಿನಗಳ ನಂತರ ಕೇಳಿದ ಆ ಹಾಡಿನಲ್ಲಿ ತೇಲುವoತೆ ಮಾಡಿತ್ತು. ಎಸ್ಪಿಬಿ ಅವರ ದ್ವನಿ ಮತ್ತು ಆ ಹಾಡಿನ
ಆಳ ಬೇರೊಂದು ಲೋಕಕ್ಕೆ ಕರೆದೊಯ್ದಿತ್ತು. "ಯಾರಿದು, ನಾ ವೀಣಾ ಅಂತ , ಯಾರ್ಬೇಕಿತ್ತು ..?" ಅತ್ತ ಕಡೆ
ಇಂದ ಬಂದ ಆ ಹುಡುಗಿಯ ದ್ವನಿ ರಸಮಯವಾಗಿ ಸಾಗುತ್ತಿದ್ದ ಹಾಡಿನ ಸಾಲುಗಳನ್ನು ನುಂಗಿಹಾಕಿತ್ತು.
" ಈ ನಂಬರ್ ನಿಂದ ಮಿಸ್ ಕಾಲ್ ಬಂತು, ಅದ್ಕೆ ಮಾಡ್ದೇ, ಯಾವ್ ವೀಣಾ ಗೊತ್ತಾಗ್ಲಿಲ್ವಲ್ಲ"
ಎಂದೆ. ಹುಡುಗಿಯರ ಗುಂಪಿನ ಪಿಸುಪಿಸು ಮಾತುಗಳ ಮಧ್ಯದಿಂದ ಬಂದ ಅದೇ ದ್ವನಿ "ಓ ಅದಾ.. ಸಾರಿ ಕಣ್ರೀ,
ನಂ ಫ್ರೆಂಡ್ ನಂಬರ್ ಗೆ ಹೋಡೀಲಿಕ್ಕೆ ಹೋಗಿ ನಿಮ್ ನಂಬರ್ ಹೊದ್ದಿದಾಳ್ ನಂ ಫ್ರೆಂಡ್, ಸಾರಿ ಕಣ್ರೀ, ಆಯ್ತಾ"
ಅಂದಳು. "ಈಟ್ಸ್ ಓಕೇ, ನಾಟ್ ಏ ಪ್ರಾಬ್ಲಮ್" ಎಂದು ಹೇಳಿ ಕಾಲ್ ಕಟ್ ಮಾಡಿದೆ. ಯಾವ್ದೋ ರಾಂಗ್ ನಂಬರ್ ಪೇಶೆಂಟ್
ಇರ್ಬೇಕೆಂದು ಅನ್ಕೊಂಡು ನಂ ಕೆಲ್ಸ ಮುಂದುವರಿಸಿದೆ.
ಏನೋ ಸುಟ್ಟ ಬೆಕ್ಕಿನ ತರ ನನ್ನ ಪಕ್ಕದಲ್ಲೇ ಸುತ್ತುತ್ತಿದ್ದ ನಮ್ಮ ಟೀಮ್ ಲೀಡರ್ "ತೇಜು , ತುಂಬಾ ಕ್ರಿಟಿಕಲ್ ಇದೆ ರೀ,
ಇವತ್ತು ಮುಗಿಸ್ಲೆಬೆಕು, ಇಲ್ಲಾಂದ್ರೆ ಆ ಮೈಕಲ್ ನನ್ನ ತಲೆ ತಿಂತಾನೆ" ಪ್ರಪಂಚದ ಯಾವ್ದೋ ಮೋಲೆಯಲ್ಲಿ
ಕುಂತ ಮೈಕಲ್ ಬಗ್ಗೆ ಹೇಳುತ್ತಾ ನನ್ನ ತಲೆ ತಿಂತಾ ಇದ್ದ. ಇನ್ನೂ ತುಂಬಾ ಇದೆ ರೀ ತೊನ್ದ್ರೆ ಇಲ್ಲ ರಾತ್ರಿ ಒಳಗೆ ಮುಗಿಸ್ತಿನಿ"ಎಂದ ಮಾತಿಗೆ
ಟೀಮ್ ಲೀಡರ್ ನಗುಮೊಗ ದಿಂದ ಹೊರಟುಹೋದ. ಇದ್ದ ಕೆಲಸ ಮಾತ್ರ ಎರಡು ಮೊರು ತಾಸಿನದ್ದು.
ಆಗಾಗ ಬಂದು ತಲೆ ತಿಂತಾ ಇದ್ದ ಟೀಮ್ ಲೀಡರ್ ಗೆ ಹೆಚ್ಚಿನ ಸಮಯ ಹೇಳಿ ಅವನು ಬರಬಹುದಾದಂತ,
ಬಂದು ತಲೆ ತಿನ್ನುವ ಸಮಯವನ್ನು ಕಡಿಮೆ ಗಳಿಸಿದ್ದೆ. ಕೆಲಸ ಮುಂದುವರೆದಿತ್ತು, ಸ್ವಲ್ಪ ಸಮಯದ ನಂತರ
ಅದೇ ನಂಬರ್ ನಿಂದ ಮತ್ತೊಂದು ಮಿಸ್ ಕಾಲ್ , ತೆಲೆ ಕೆಡಿಸಿಕೊಳ್ಳದೇ ಕೆಲಸದಲ್ಲಿ ಮಗ್ನನಾಗಿದ್ದೆ.
ಮಗದೊಮ್ಮೆ ಬಂದ ಕಾಲ್ ಮಿಸ್ ಆಗದೇ ರಿಂಗಣಿಸುತಿತ್ತು. ಈ ಸಾರಿ ಕೊನೆಯದಾಗಿ ಗದರಿಸಲೆಂದೇ
ಕಾಲ್ ರಿಸಿವ್ ಮಾಡಿದೆ."ಹೆಲೋ, ಸಾರಿ ಕಣ್ರೀ" ಮೊದಲನೆ ಸಾರಿ ಕೇಳಿದ ಅದೇ ದ್ವನಿ ಆದರೆ ಗುಂಪು
ಹುಡುಗಿಯರ ಪಿಸುಮಾತು ಅಲ್ಲಿರಲಿಲ್ಲ." ನಾನೇ ಮಿಸ್ ಕಾಲ್ ಕೊಟ್ಟಿದ್ದು, ಯಾವ್ ಫ್ರೆಂಡು ಅಲ್ಲ.
ಸುಮ್ಮನೇ ಹಾಗೆ ಒಂದು ನಂಬರ್ ಡೈಯಲ್ ಮಾಡಿದೆ ನಿಮ್ಗೆ ಬಂದಿದೆ" ಎಂದಳು.
"ಹೆಲೋ, ತಲೆ ತಿಂಬೇಡಿ, ನಂಗೆ ತುಂಬಾ ಕೆಲ್ಸ ಇದೆ, ದಯವಿಟ್ಟು ಕಾಲ್ ಕಟ್ ಮಾಡಿ ಇಲ್ಲಾಂದ್ರೆ ನಾನೇ ಕಟ್ ಮಾಡ್ತೀನಿ"
ಎನ್ನಲು" ಏನ್ರೀ, ಪ್ರಪಂಚದಲ್ಲಿ ನಿಮ್ಮೊಬ್ರಿಗೆ ಕೆಲ್ಸ ಇರೋ ಹಾಗೆ ಆಡ್ತಿರಲ್ಲ, ನಾ ಹೇಳೋದ್ ಸ್ವಲ್ಪ ಕೇಳಿ" ಎಂದಿತು ಆ ದ್ವನಿ.
ಒಳ್ಳೇ ಕಥೆ ಆಯ್ತಲ್ಲ ಮಾರಾಯ, ತೀರಾ ಪರ್ಸನಲ್ ಆದ ಮೊಬೈಲ್ ಗೆ ಕಾಲ್ ಮಾಡಿ ನಂಗೆ ಗದರ್ಸೋದಾ, "ಓಕೇ, ಆಗ್ಲೀ ಹೇಳೆ
ಬಿಡಿ ಎನ್ ನಿಮ್ ಕಥೆ"ಕುತೊಹಲದಿಂದ ಕೇಳಿದೆ." ರೀ ನಂ ಹೆಸ್ರು ವೀಣಾ ಅಲ್ಲ, ನನ್ನ ಹೆಸ್ರು ರೂಪ ಅಂತ, ಗೂಕಾಕ್ ನಿಂದ ಮಾಡ್ತಿರೋದು
, ನಾನು ಬಿ ಎಸ್ಸಿ ಒದ್ತಾಇದಿನಿ, ಕಾಲೇಜ್ ಹಾಸ್ಟಿಲ್ ನಲ್ಲಿ ಇರೋದು, ಆಗ ಮಾತಾಡ್ಟೀದ್ನಲ್ಲ ನಂ ಜೊತೆ ಫ್ರೆಂಡ್ಸೂ ಇದ್ರು, ನಂಗೆ ಇವತ್ತು
ಫೈನಲ್ ಎಗ್ಸಾಂ ಮೂಗೀತು, ನಾಳೆ ಎಲ್ರೂ ಮನೆಗೆ ಹೋಗ್ತಾ ಇದೀವಿ ಸುಮ್ನೇ ತಮಾಷೆಗೆ ಅಂತಾ ಒಂದ್ ನಂಬರ್ ಹೊಡೆದ್ವಿ ಅದು ನಿಮ್ಗೆ ಬಂತು
ರಿಯಲೀ ನಿಮ್ ವಾಯ್ಸ್ ಇಷ್ಟ ಆಯ್ತು , ನೀವೇನ್ ಮಾಡ್ತಿರೋದು..??"ಅಂದಳು. ಇವಳಜ್ಜಿ ಎಗ್ಸಾಂ ಮುಗಿದಿದೆ ಮಾಡಕ್ಕೆ ಕೆಲ್ಸ ಇಲ್ಲ ಸುಮ್ನೇ ತಲೆ
ತಿನ್ ತಾಳೆ. ಇವ್ಳಿಗೆ ಬುದ್ದಿ ಕಳಿಸ್ಲೆ ಬೇಕು ಅನ್ಕೊಂಡು ಏರಿದ ದನಿಯಲ್ಲಿ "ಹೆಲೋ ಇದು ರಾಜೇಂದ್ರ ಅಂತ, ಬೆಂಗಳೂರಿಂದ, ನಂದು ದುಡ್ಡಿಗೆ
ಮನುಷ್ಯರನ ಕೊಲ್ಲೊ ಬಿಸಿನೆಸ್ಸು, ಇನ್ನೊಂದ್ಸಾರಿ ಕಾಲ್ ಮಾಡಿ ತಲೆ ತಿಂದ್ರೆ ನಿಂಗೂ ಶಿವನಪಾದ ಸೇರ್ಸ್ತೀನಿ"ಎಂದೆ.
"ರೀ ಸುಮ್‌ನ್ನೀರ್ರಿ ಸಾಕು, ನಿಮ್ ವಾಯ್ಸ್ ಹೇಳುತ್ತೆ ನೀವು ಅಂತಾವ್ರಲ್ಲಾಂತಾ, ನಿಜ ಹೇಳಿ"ಮತ್ತದೆ ತಿರುಗದರಿಕೆ.
"ಬಿಟ್ಟು ಬಿಡು ತಾಯೀ, ನಾನು ಸಾಫ್ಟ್‌ವೇರ್ ಇಂಜಿನಿಯರ್, ಕೆಲ್ಸ ತುಂಬಾ ಇರುತ್ತೆ, ದಯವಿಟ್ಟು ತಲೆ ತಿನ್ ಬೇಡ"ಎಂದು ಅಂಗಲಾಚಿದೆ.
"ಹಾಗ್‌ಬನ್ನಿ ದಾರಿಗೆ, ನಂಗೆ ನಿಮ್ಮ ಫ್ರೆಂಡು ಆಗ್‌ಬೇಕು ಅನಿಸಿತು ಅದ್ಕೆ ತಿರುಗಿ ಕಾಲ್ ಮಾಡಿದೆ ದಯವಿಟ್ಟು ತಪ್ಪು ತಿಳ್ಕೊಬೇಡಿ,
ಈ ಹಾರ್ಡ್‌ವೇರ್-ಸಾಫ್ಟ್‌ವೇರ್ ಅಂತಾರಲ್ಲ ಹಂಗಂದ್ರೆ ಏನ್ರೀ..?"ಪ್ರಶ್ನೆಗಳ ಸುರಿಮಳೆಗೆ ಪೀಟಿಕೆ ಇಟ್ಟ ಹಾಗೆ ಕೇಳಿದಳು."ಮೇಡಮ್, ನಿಮ್ಗೆ ಅದೆಲ್ಲ ಈಗ್ಲೇ ಅರ್ಥ ಆಗಲ್ಲ, ಸಿಂಪಲ್ ಆಗಿ ಹೇಳ್‌ಬೇಕಂದ್ರೆ ನೀವು ಮಾತಾಡ್ತೀದಿರಲ್ಲ ಮೊಬೈಲ್ ಅದು ಹಾರ್ಡ್‌ವೇರ್
ಅದರ ಎಲ್ಲ ಕೆಲ್ಸ ಮಾಡೋಕ್ಕೆ ಒಳಗೆ ಇರೋ ಕೋಡ್ ಸಾಫ್ಟ್‌ವೇರ್" ಎಂದು ಮೋಟುಕು ಗೋಳಿಸಿದೆ. ತೀರಾ ಮುಗ್ಡತೆ ಇಂದ ಬಂದ
ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಾ ಸುಮಾರು ಮುಕ್ಕಾಲು ಗಂಟೆ ಕಳೆದು ಹೋಗಿತ್ತು. ತನ್ನ ಊರಿನ ಬಗ್ಗೆ, ತನ್ನ ಪರಿವಾರದ ಬಗ್ಗೆ
ಹೇಳಿ ನನ್ನ ಬಗ್ಗೆ ಕೇಳ ತೊಡಗಿದಳು. ಕೆಲಸದ ನೆಪ ಹೇಳಿ ಕಾಲ್ ಕಟ್ ಮಾಡಿದೆ. ಇದ್ದ ಕೆಲಸ ಮುಗಿಸಿ ಮನೆ ಸೇರಲು ಬಸ್ ನಿಲ್ದಾಣಕ್ಕೆ
ಬಂದೆ. ಕುರಿ ನುಂಗಿದ ಹೆಬ್ಬಾವಿನಂತೆ ಬಂದ ಬಿಎಂಟಿಸಿ ಬಸ್ ಏರಿ ಮನೆ ಸೇರಿದೆ. ತುಂಬಿದ್ದ ಆ ಬಸ್ನಲ್ಲಿದ್ದ ಜೇಬುಗಳ್ಳನ ಕೈ ಚಳಕಕ್ಕೆ
ಮೊಬೈಲ್ ಶರಣಾಗಿದ್ದುದು ನನ್ನ ಗಮನಕ್ಕೆ ಬಂದಿರಲಿಲ್ಲ. ಮೊಬೈಲ್ನಲ್ಲಿ ಅಡಗಿದ್ದ ಆ ಮಿಸ್ ಕಾಲ್ ನಂಬರ್ ಗೇಲಿ ಮಾಡುತಿತ್ತು.
98860... ಅಲ್ಲ 99860..ಅಲ್ವೇ ಅಲ್ಲ...